ಬೈಕಂಪಾಡಿ ಹತ್ತಿರ ಹೈವೇ ಮೇಲೆ ಅಳವಡಿಸಿದ ಗ್ಯಾಂಟ್ರಿ ಸ್ಟ್ರಕ್ಚರ್ ಏನು? ಜನರಿಗೆ ತಿಳಿಯಬೇಕಾದ ಪ್ರಮುಖ ಮಾಹಿತಿ


ಬೈಕಂಪಾಡಿ ಹತ್ತಿರದ ಹೆದ್ದಾರಿಯಲ್ಲಿ ಇತ್ತೀಚೆಗೆ ರಸ್ತೆಯ ಮೇಲೆ ದೊಡ್ಡ ಲೋಹದ ಪ್ರೇಮ್ ಮಾದರಿಯ ಒಂದು ಸ್ಟ್ರಕ್ಚರ್ ಅಳವಡಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಹೈವೇ ಗ್ಯಾಂಟ್ರಿ ಸ್ಟ್ರಕ್ಚರ್ ಎಂದು ಕರೆಯಲಾಗುತ್ತದೆ. ಹಲವಾರು ಜನರು ಈಈ ರಚನೆಯನ್ನು ನೋಡಿ "ಇದನ್ನು ಏಕೆ ಅಳವಡಿಸಲಾಗಿದೆ?"ಅಥವಾ "ಇದರಲ್ಲಿ ಕ್ಯಾಮೆರಾ ಇದೆಯೇ?" ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಈ ಸ್ಟ್ರಕ್ಚರ್ ಬಗ್ಗೆ ಜನರಿಗೆ ಸರಿಯಾದ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ.

ಹೈವೇ ಗ್ಯಾಂಟ್ರಿ ಸ್ಟ್ರಕ್ಚರ್ ಎನ್ನುವುದು ರಸ್ತೆ ಮೇಲ್ಭಾಗದಲ್ಲಿ ಅಳವಡಿಸಲಾದ ಒಂದು ಲೋಹದ ಫ್ರೇಮ್ ವ್ಯವಸ್ಥೆ. ಇದರ ಮುಖ್ಯ ಉದ್ದೇಶ ಟ್ರಾಫಿಕ್ ನಿಯಂತ್ರಣ, ವಾಹನ ವೇಗವನ್ನು ಗಮನಿಸುವುದು ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿನ ಹಲವಾರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂತಹ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ.

ಈ ಗ್ಯಾಂಟ್ರಿ ಸ್ಟ್ರಕ್ಚರ್ ಮೇಲೆ ಸಾಮಾನ್ಯವಾಗಿ ಟ್ರಾಫಿಕ್ ಕ್ಯಾಮೆರಾ ಸ್ಪೀಡ್ ಮಾನಿಟರಿಂಗ್ ಕ್ಯಾಮೆರಾ ಅಥವಾ ಡಿಜಿಟಲ್ ಸೈನ್ ಬೋರ್ಡಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮರಾಗಲು ರಸ್ತೆ ಮೇಲೆ ಸಂಚರಿಸುವ ವಾಹನಗಳ ಚಲನೆಯನ್ನು ಗಮನಿಸುತ್ತವೆ. ಯಾವುದಾದರೂ ವಾಹನ ನಿಗದಿತ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಓಡಿದರೆ ಅಥವಾ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ಅದನ್ನು ದಾಖಲು ಮಾಡುವ ಸಾಧ್ಯತೆ ಇದೆ. ಇದರಿಂದ ರಸ್ತೆ ನಿಯಮಗಳನ್ನು ಪಾಲಿಸಲು ಚಾಲಕರಿಗೆ ಹೆಚ್ಚು ಜಾಗೃತಿ ಬರುತ್ತದೆ.


ಇದರ ಜೊತೆಗೆ, ಕೆಲವೆಡೆ ಈ ಗ್ಯಾಂಟ್ರಿ ಸ್ಟ್ರಕ್ಚರ್ ಮೇಲೆ ಎಲೆಕ್ಟ್ರಾನಿಕ್ ಮೆಸೇಜ್ ಬೋರ್ಡ್ ಗಳು ಕೂಡ ಇರುತ್ತವೆ. ಈ ಬೋರ್ಡ್ಗಳ ಮೂಲಕ ಚಾಲಕರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ.ಉದಾಹರಣೆಗೆ ಮುಂದೆ ಟ್ರಾಫಿಕ್ ಜಾಮ್ ಇದ್ದರೆ ರಸ್ತೆ ದುರಸ್ತಿ ನಡೆಯುತ್ತಿದ್ದರೆ ಅಥವಾ ಹವಾಮಾನ ಸಂಬಂಧಿತ ಎಚ್ಚರಿಕೆಗಳಿದ್ದರೆ ಈ ಬೋರ್ಡ್ ಗಳ ಮೂಲಕ ತಿಳಿಸಲಾಗುತ್ತದೆ. ಇದರಿಂದ ಚಾಲಕರು ಮುಂಚಿತವಾಗಿ ಎಚ್ಚರಿಕೆಯಿಂದ ವಾಹನ ಚಲಾಯಿಸಲು ಸಾಧ್ಯವಾಗುತ್ತದೆ.

ಬೈಕಂಪಾಡಿ ಭಾಗವು ಮಂಗಳೂರು ನಗರದ  ಪ್ರಮುಖ ಕೈಗಾರಿಕಾ ಮತ್ತು ಸಂಚಾರ ಪ್ರದೇಶಗಳಲ್ಲಿ ಒಂದಾಗಿದೆ.ಈ ಭಾಗದಲ್ಲಿ ದಿನನಿತ್ಯವೂ ಭಾರಿ ವಾಹನಗಳು,ಲಾರಿಗಳು,ಬಸ್ಸುಗಳು ಹಾಗೂ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತದೆ.ಈ ಕಾರಣದಿಂದ ಟ್ರಾಫಿಕ್ ನಿಯಂತ್ರಣ ಮತ್ತು ರಸ್ತೆ ಸುರಕ್ಷತೆ ತುಂಬಾ ಅಗತ್ಯವಾಗುತ್ತದೆ.ಅದಕ್ಕಾಗಿ ಇಂತಹ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸುವುದು ಸರ್ಕಾರದ ಪ್ರಮುಖ ಪ್ರಯತ್ನವಾಗಿದೆ.

ರಸ್ತೆ ಸುರಕ್ಷತೆ ಎಂದರೆ ಕೇವಲ ಸರ್ಕಾರದ ಹೊಣೆಗಾರಿಕೆ ಮಾತ್ರವಲ್ಲ,ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ.ಗ್ಯಾಂಟ್ರಿ ಸ್ಟ್ರಕ್ಚರ್ ಇದ್ದರೂ ಅಥವಾ ಇರದಿದ್ದರೂ ಚಾಲಕರು ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಗದಿತ ವೇಗದಲ್ಲಿ ವಾಹನ ಚಲಾಯಿಸುವುದು ಹೆಲ್ಮೆಟ್ ಧರಿಸುವುದು ಸೀಟ್ ಬೆಲ್ಟ್ ಹಾಕುವುದು ಮತ್ತು ಟ್ರಾಫಿಕ್ ಸೂಚನೆಗಳನ್ನು ಗಮನಿಸುವುದು ಬಹಳ ಮುಖ್ಯವಾಗಿದೆ. 

ಇಂತಹ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವುದರ ಮೂಲಕ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದು ಮತ್ತು ಜನರ ಸುರಕ್ಷತೆಯನ್ನು ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ ಆದ್ದರಿಂದ ಜನರು ಈ ರೀತಿಯ ವ್ಯವಸ್ಥೆಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳದೆ ಇದರ ಪ್ರಯೋಜನಗಳನ್ನು ತಿಳಿದುಕೊಂಡು ಸಹಕರಿಸುವುದು ಅಗತ್ಯವಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಬೈಕಂಪಾಡಿ ಹತ್ತಿರ ಅಳವಡಿಸಲಾದ ಈ ಹೈವೇ ಗ್ಯಾಂಟ್ರಿ ಸ್ಟ್ರಕ್ಚರ್ ಜನರ ಸುರಕ್ಷತೆಗಾಗಿ ಮತ್ತು ಉತ್ತಮ ಟ್ರಾಫಿಕ್ ನಿರ್ವಹಣೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ ಚಾಲಕರು ಮತ್ತು ಸಾರ್ವಜನಿಕರು ಈ ವ್ಯವಸ್ಥೆಯ ಬಗ್ಗೆ ಅರಿವು ಪಡೆದು ರಸ್ತೆ ನಿಯಮಗಳನ್ನು ಪಾಲಿಸಿದರೆ ನಿಮ್ಮ ಪ್ರಯಾಣ ಇನ್ನಷ್ಟು ಸುರಕ್ಷಿತವಾಗಬಹುದು.



Comments

Popular posts from this blog

ಮಂಗಳೂರಿನ ವಾತಾವರಣದಲ್ಲಿ ಬದಲಾವಣೆ:ಮೋಡ ಕವಿದ ಆಕಾಶ, ಜನರಿಗೆ ಸ್ವಲ್ಪ ನೆಮ್ಮದಿ

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲು: ಇವತ್ತಿನ Weather ಅಪ್ಡೇಟ್ ಮತ್ತು ಜನರಿಗೆ ಆರೋಗ್ಯ ಎಚ್ಚರಿಕೆ