ಮಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲು: ಇವತ್ತಿನ Weather ಅಪ್ಡೇಟ್ ಮತ್ತು ಜನರಿಗೆ ಆರೋಗ್ಯ ಎಚ್ಚರಿಕೆ



ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವುದು ಜನರ ಗಮನ ಸೆಳೆಯುತ್ತಿದೆ ಕರಾವಳಿ ಕರ್ನಾಟಕದ ಪ್ರಮುಖ ನಗರವಾಗಿರುವ ಮಂಗಳೂರಿನಲ್ಲಿ ಸಾಮಾನ್ಯವಾಗಿ ಬಿಸಿಲು ಮತ್ತು ಆರ್ದ್ರತೆ (humidity ) ಎರಡೂ ಹೆಚ್ಚಾಗಿರುತ್ತವೆ.ಆದರೆ ಕಳೆದ ಕೆಲವು ದಿನಗಳಿಂದ ತಾಪಮಾನ ಇನ್ನಷ್ಟು ಹೆಚ್ಚಿರುವುದರಿಂದ ಜನರು ತಮ್ಮ ದಿನಚರಿಯಲ್ಲಿ ಕೆಲವು ಮುಣ್ಣೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ .ಇವತ್ತಿನ ಹವಾಮಾನ ವರದಿ ಪ್ರಕಾರ ಮಂಗಳೂರಿನಲ್ಲಿ ತಾಪಮಾನ ಸುಮಾರು 32°C ರಿಂದ 34°C ನಡುವೆ ದಾಖಲಾಗುತ್ತಿದೆ.ಇದರಿಂದ ಮಧ್ಯಾಹ್ನ ಸಮಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿ ಅನುಭವವಾಗುತ್ತಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನ ಬಿಸಿಲಿನ ಬಗ್ಗೆ ಒಂದು  ಹಾಸ್ಯಾತ್ಮಕ ಪೋಸ್ಟ್ ಕೂಡ ವೈರಲ್ ಆಗಿದೆ. ಆ ಪೋಸ್ಟ್ನಲ್ಲಿ "ಸೂರ್ಯನು ತನ್ನ ಹೊಸ ಹೆಡ್ ಕ್ವಾರ್ಟರ್ ಅನ್ನು ಮಂಗಳೂರಿನಲ್ಲಿ ಘೋಷಿಸಿದ್ದಾನೆ". ಎಂಬ ರೀತಿಯಲ್ಲಿ ಹೇಳಲಾಗಿದೆ.ಜೊತೆಗೆ ಜನರು ಹೊರಗಡೆ ಹೋಗುವಾಗ ಛತ್ರಿ, ಸನ್ ಗ್ಯಾಸ್ ಮತ್ತು ದಿನಾಲು ಸಾಕಷ್ಟು ನೀರು ಕುಡಿಯಬೇಕು ಎಂದು ಸಲಹೆ ನೀಡಲಾಗಿದೆ. ಇದು ನಿಜವಾದ ಸುದ್ದಿ ಅಲ್ಲದಿದ್ದರೂ,ಮಂಗಳೂರಿನ ಬಿಸಿಲಿನ ತೀವ್ರತೆ ಯನ್ನು ಹಾಸ್ಯ ರೂಪದಲ್ಲಿ ತೋರಿಸುವ ಒಂದು ಕ್ರಿಯೇಟಿವ್ ಪ್ರಯತ್ನವಾಗಿದೆ.ಈ ರೀತಿಯ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆಯುದರ ಜೊತೆಗೆ ಒಂದು ಪ್ರಮುಖ ಸಂದೇಶವನ್ನು ನೀಡುತ್ತದೆ.

ವೈದ್ಯರು ಮತ್ತು ಆರೋಗ್ಯ ತಜ್ಞರ ಪ್ರಕಾರ,ಬೇಸಿಗೆ ಸಮಯದಲ್ಲಿ ದೇಹದಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಬಿಸಿಲಿನ ಜೊತೆಗೆ ಅರ್ದ್ರತೆ ಹೆಚ್ಚಿರುವುದರಿಂದ ದೇಹದಲ್ಲಿ ಬೇಗನೆ ದನಿವು ಕಾಣಿಸಿಕೊಳ್ಳಬಹುದು ಆದ್ದರಿಂದ ದಿನದಲ್ಲಿ ಕನಿಷ್ಠ 2ರಿಂದ 3 ಲೀಟರ್ ನೀರು ಕುಡಿಯುವುದು ಅತ್ಯಂತ ಮುಖ್ಯವಾಗಿದೆ ಜೊತೆಗೆ ತೆಂಗಿನಕಾಯಿ ನೀರು ಹಣ್ಣುಗಳು ಮತ್ತು ತಂಪಾದ ಪಾನೀಯವನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಡಲು ಸಹಾಯವಾಗುತ್ತದೆ.



ಮಂಗಳೂರಿನ ನಗರ ಜೀವನದಲ್ಲಿಯೂ ಈ ಬಿಸಿಲಿನ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದೆ. ಮಧ್ಯಾಹ್ನ ಸಮಯದಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ಸ್ವಲ್ಪ ಕಡಿಮೆಯಾಗುತ್ತಿರುವುದು ಗಮನಕ್ಕೆ ಬರುತ್ತದೆ. ಹಲವಾರು ಜನರು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ತಮ್ಮ ಕೆಲಸಗಳನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವು ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರು ಮಧ್ಯಾಹ್ನದ ತೀವ್ರ ಬಿಸಿಲಿನ ಸಮಯದಲ್ಲಿ ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತಿವೆ.


ಬಿಸಿಲಿನ ಪರಿಣಾಮದಿಂದ ಹೊರಗಡೆ ಕೆಲಸ ಮಾಡುವ ಕಾರ್ಮಿಕರು ಡೆಲಿವರಿ ಸಿಬ್ಬಂದಿ ಮತ್ತು ರಸ್ತೆ ವ್ಯಾಪಾರಿಗಳು ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ.ಇಂತಹ ಸಂದರ್ಭಗಳಲ್ಲಿ ತಲೆಗೆ ಕ್ಯಾಪ್ ಅಥವಾ ಟೋಪಿ ಧರಿಸುವುದು, ಛತ್ರಿ ಬಲಸುವುದು ಮತ್ತು ಸಾಧ್ಯವಾದಷ್ಟು ನೆರಳಿನಲ್ಲಿ ಕೆಲಸ ಮಾಡುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ 3:00 ಗಂಟೆಯವರೆಗೆ ಬಿಸಿಲಿನ ತೀವ್ರತೆ ಹೆಚ್ಚು ಇರುವುದರಿಂದ ಆ ಸಮಯದಲ್ಲಿ ಹೆಚ್ಚು ಕಾಲ ಹೊರಗೆ ಇರುವುದನ್ನು ತಪ್ಪಿಸುವುದು ಉತ್ತಮ.

ಹವಾಮಾನ ತಜ್ಞರ ಪ್ರಕಾರ ಮುಂದಿನ ಕೆಲವು ದಿನಗಳಲ್ಲಿಯೂ ಮಂಗಳೂರಿನಲ್ಲಿ ತಾಪಮಾನ ಸುಮಾರು 31°C  ರಿಂದ 34°C ನಡುವೆ ಮುಂದುವರೆಯುವ ಸಾಧ್ಯತೆ ಇದೆ. ಕೆಲ ದಿನಗಳಲ್ಲಿ ಮೋಡ ಕವಿದ ವಾತಾವರಣ ಮತ್ತು ಸ್ವಲ್ಪ ಮಳೆಯ ಸಾಧ್ಯತೆಯೂ ಇದ್ದರೂ ಕಡಿಮೆಯಾಗುವ ಲಕ್ಷಣಗಳು ಇನ್ನು ಸ್ಪಷ್ಟವಾಗಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ವೃದ್ಧರು ,ಮಕ್ಕಳು ಮತ್ತು ಆರೋಗ್ಯ ಸಮಸ್ಯೆ ಇರುವವರು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಾಕಷ್ಟು ನೀರು ಕುಡಿಯುವುದು ಹಗುರವಾದ ಬಟ್ಟೆ ಧರಿಸುವುದು ಮತ್ತು ತೀವ್ರ ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು ಅತ್ಯಂತ ಮುಖ್ಯವಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಮಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲು ಜನರ ದಿನನಿತ್ಯದ ಜೀವನದ ಮೇಲೆ ಸ್ವಲ್ಪ ಪರಿಣಾಮ ಬೀರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಾತ್ಮಕ ಪೋಸ್ಟ್ ಗಳು ವೈರಲಾಗುತ್ತಿದ್ದರು ಅದರ ಮೂಲಕ ಜನರಿಗೆ ಒಂದು ಪ್ರಮುಖ ಸಂದೇಶ ಸಿಗುತ್ತದೆ. ಬೇಸಿಗೆ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಬಿಸಿಲಿನ ನಡುವೆಯೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಸುರಕ್ಷಿತವಾಗಿ ದಿನಚರಿಯನ್ನು ಮುಂದುವರಿಸಬಹುದು.

Comments

Popular posts from this blog

ಮಂಗಳೂರಿನ ವಾತಾವರಣದಲ್ಲಿ ಬದಲಾವಣೆ:ಮೋಡ ಕವಿದ ಆಕಾಶ, ಜನರಿಗೆ ಸ್ವಲ್ಪ ನೆಮ್ಮದಿ

ಬೈಕಂಪಾಡಿ ಹತ್ತಿರ ಹೈವೇ ಮೇಲೆ ಅಳವಡಿಸಿದ ಗ್ಯಾಂಟ್ರಿ ಸ್ಟ್ರಕ್ಚರ್ ಏನು? ಜನರಿಗೆ ತಿಳಿಯಬೇಕಾದ ಪ್ರಮುಖ ಮಾಹಿತಿ