ಮಂಗಳೂರಿನ ಎಂ. ಜಿ ರಸ್ತೆಯ ಹೊಸ ಸೇತುವೆ ಕಾಮಗಾರಿ ಹಿನ್ನಲೆ: ಟ್ರಾಫಿಕ್ ಮಾರ್ಗಗಳಲ್ಲಿ ಬದಲಾವಣೆ
ಖಾಸಗಿ ಸರ್ವಿಸ್ ಬಸ್ಸುಗಳು
ಕೊಟ್ಟಾರ ಜಂಕ್ಷನ್ ನಿಂದ ಕೆಪಿಟಿ ಜಂಕ್ಷನ್ - ಬಟ್ಟಗುಡ್ಡ ಜಂಕ್ಷನ್ - ಬಿಜೈ ಜಂಕ್ಷನ್ - ಪಿಯೋ ಮಾಲ್ ರಸ್ತೆ - ಜೈಲ್ ರಸ್ತೆ ಮೂಲಕ ಪಿವಿಎಸ್ ಜಂಕ್ಷನ್ ಕಡೆಗೆ ಸಂಚರಿಸಬೇಕು.
ಖಾಸಗಿ ಸಿಟಿ ಬಸ್ಸುಗಳು
ಕೊಟ್ಟಾರ ಜಂಕ್ಷನ್ ನಿಂದ ಲೇಡಿಹಿಲ್ ಜಂಕ್ಷನ್ - ಲಾಲ್ ಬಾಗ್ - ಕೆಎಸ್ಆರ್ಟಿಸಿ - ಬಿಜೈ ಜಂಕ್ಷನ್ - ಪಿಯೋ ಮಾಲ್ ರಸ್ತೆ - ಜೈಲ್ ರಸ್ತೆ ಮೂಲಕ ಪಿವಿಎಸ್ ಜಂಕ್ಷನ್ ಕಡೆಗೆ ಹೋಗಬೇಕು.
ಸರಕು ಸಾಗಣೆ ವಾಹನಗಳು
ಕೊಟ್ಟಾರ ಜಂಕ್ಷನ್ ನಿಂದ ಲೇಡಿಹಿಲ್ ಜಂಕ್ಷನ್ - ಮಣ್ಣಗುಡ್ಡ ಜಂಕ್ಷನ್ - ದುರ್ಗಾ ಮಹಲ್ - ನ್ಯೂ ಚಿತ್ರ ಜಂಕ್ಷನ್ - ಬಾಲಾಜಿ ಜಂಕ್ಷನ್ ಮೂಲಕ ಸಂಚರಿಸಬೇಕು.
ಖಾಸಗಿ ಲಕ್ಸುರಿ ಬಸ್ಸುಗಳು
ಕೊಟ್ಟಾರ ಜಂಕ್ಷನ್ ನಿಂದ ಕೆಪಿಟಿ ಜಂಕ್ಷನ್ - ನಂತೂರು ಜಂಕ್ಷನ್ - ಶಿವಭಾಗ್ ಜಂಕ್ಷನ್ ಮೂಲಕ ಸಂಚರಿಸಬೇಕು.
KSRTC ಸಾಮಾನ್ಯ ಮತ್ತು express ಬಸ್ಸುಗಳು
KSRTC ಬಸ್ ನಿಲ್ದಾಣದಿಂದ ಬಿಜೈ ಚರ್ಚ್ ರಸ್ತೆ - ಪಿಯೋ ಮಾಲ್ (tandoor ಬಾರ್ ಬಳಿ) - ಕರಂಗಲ್ಪಾಡಿ ಜಂಕ್ಷನ್ ಅಲ್ಲಿ ಎಡಕ್ಕೆ ತಿರುಗಬೇಕು.
KSRTC ವೋಲ್ವೋ ಮತ್ತು ರಾಜಹಂಸ ಬಸ್ಸುಗಳು
KSRTC ಬಸ್ ನಿಲ್ದಾಣದಿಂದ ಬಿಜೈ ಜಂಕ್ಷನ್ - ಬಟ್ಟಗುಡ್ಡ - ಕೆಪಿಟಿ ಜಂಕ್ಷನ್ ಮೂಲಕ ಸಂಚರಿಸಬೇಕು.
ಕಾರುಗಳು ಮತ್ತು ಎರಡು ಚಕ್ರದ ವಾಹನಗಳು
ಲಾಲ್‌ಬಾಗ್ ನಿಂದ ಬಲ್ಲಾಲ್ ಬಾಗ್ ಮೂಲಕ ಪಿವಿಎಸ್ ಕಡೆಗೆ ಹೋಗುವ ವಾಹನಗಳು ಬಲ್ಲಾಲ್ ಬಾಗ್ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ದುರ್ಗಾ ಮಹಲ್ ಕಡೆಗೆ ಹೋಗಬೇಕು ಅಥವಾ ಟಿ.ಎಂ. ಎ ಪೈ ಹಾಲ್ ಮಾರ್ಗವಾಗಿ ಪಟ್ಟಮುಡಿ ಕ್ರಾಸ್ ರಸ್ತೆ - ಜಿ. ಜಿ ರಸ್ತೆ - ವಿಶಾಲ್ ನರ್ಸಿಂಗ್ ಹೋಮ್ ಕಡೆಗೆ ಹೋಗಬಹುದು.
ನೋ - ಪಾರ್ಕಿಂಗ್ ನಿಯಮಗಳು
ವಾಹನ ಸಂಚಾರದಲ್ಲಿ ಯಾವುದೇ ಅಡಚಣೆ ಆಗದಂತೆ ಕೆಳಗಿನ ಪ್ರದೇಶಗಳಲ್ಲಿ ಪಾರ್ಕಿಂಗ್ ಸಂಪೂರ್ಣ ನಿಷೇಧಿಸಲಾಗಿದೆ:
• ಬಿಜೈ ಜಂಕ್ಷನ್ ನಿಂದ ಪಿವಿಎಸ್ ಜಂಕ್ಷನ್ (ಜೈಲ್ ರಸ್ತೆ ಮೂಲಕ)
• ತಂದೂರ್ ಹೋಟೆಲಿನಿಂದ ಕರಂಗಲ್ಪಾಡಿ ಜಂಕ್ಷನ್
• ಪಿವಿಎಸ್ ಜಂಕ್ಷನಿನಿಂದ ಲಾಲ್ ಬಾಗ್ ಜಂಕ್ಷನ್
• ಲಾಲ್ ಬಾಗ್ ಜಂಕ್ಷನಿನಿಂದ ಮಣ್ಣಗುಡ್ಡ
• ಕೊಡಿಯಾಲ್ ಗುತ್ತು ಕ್ರಾಸ್ ನಿಂದ ಕೊಡಿಯಾಲ್ ಗುತ್ತು ಜಂಕ್ಷನ್
ಇದಲ್ಲದೆ, ಪಿಯೋ ಮಾಲ್ ರಸ್ತೆಯಲ್ಲಿ ಬಿಜೈ ಭಾಗದಿಂದ ಬರುವ ವಾಹನಗಳು ಕೊಡಿಯಾಲ್ ಗುತ್ತು ಕ್ರಾಸ್ ರಸ್ತೆಗೆ ಬಲಕ್ಕೆ ತಿರುಗಿದಕ್ಕೂ ನಿರ್ಬಂಧ ವಿಧಿಸಲಾಗಿದೆ.

Comments
Post a Comment