ಮಂಗಳೂರಿನಲ್ಲಿ ಮತ್ತೆ ರಕ್ತಪಾತ : ತೊಕ್ಕೊಟ್ಟು ಫ್ಲೈ ಓವರ್ ಮೇಲೆ ರೌಡಿ ಶೀಟರ್ ಬರ್ಬರ ಹತ್ಯೆ


ಕಳೆದ ಹತ್ತು ತಿಂಗಳಿನಿಂದ ಮಂಗಳೂರು ನಗರ ರೌಡಿಗಳ ಹಾವಳಿಯಿಂದ ಮುಕ್ತ ವಾಗಿತ್ತು.ಆದರೆ ಮತ್ತೆ ಮಾರಕಾಸ್ತ್ರಗಳು ಝಲಪಿಸಿದೆ.ಬಿಲ ಸೇರಿದ್ದ ಪಾತಕಿಗಳು ಹೊರಬಂದು ಇವತ್ತು ರಸ್ತೆಯಲ್ಲೇ ಒಂದು ಹೆಣ ಹಾಕಿದ್ದಾರೆ.ನಸುಕಿನ ಜಾವದಲ್ಲಿ ಮಂಗಳೂರು ನಿಶ್ಶಬ್ದವಾಗಿದ್ದಾಗಲೇ ರೌಡಿಗಳು ರಕ್ತ ಹರಿಸಿದ್ದಾರೆ. ಇಂದು ಮುಂಜಾನೆ ತೊಕ್ಕೊಟು ಸೇತುವೆ ಮೇಲೆಯೇ ರೌಡಿ ಶೀಟರ್ ಒಬ್ಬನ ಬರ್ಬರ ಹತ್ಯೆ ನಡೆದಿದೆ.

ಆರಿಫ್ ಹುಸೇನ್ ಅಲಿಯಾಸ್ (ಟ್ಯಾಬ್ಲೆಟ್ ಆರಿಫ್) ಕೊಲೆಯಾದ ರೌಡಿ ಶೀಟರ್, ಈತ ಮೂಲತಃ ಮಂಗಳೂರಿನ ಕುದ್ರೋಳಿ ನಿವಾಸಿ. ಸದ್ಯ ಉಚ್ಚಿಲದ ಮುಳ್ಳುಗಡ್ಡೆಯಲ್ಲಿ ವಾಸವಿದ್ದ.42 ವರ್ಷದ ಟ್ಯಾಬ್ಲೆಟ್ ಆರಿಫ್ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಇದೆ .ಈತ ಧಕ್ಕೆಯಲ್ಲಿ ಮೀನಿನ ವ್ಯಾಪಾರ ಮಾಡುತ್ತ ಇದ್ದ, ತನ್ನ ವ್ಯಾಪಾರಕ್ಕಾಗಿ ಬೈಕಿನಲ್ಲಿ ಧಕ್ಕೆಗೆ ಹೋಗುತ್ತಾ ಇದ್ದ ಸಂಧರ್ಬದಲ್ಲಿ ಕಾರಿನಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಟ್ಯಾಬ್ಲೆಟ್ ಆರಿಫ್ನನ್ನ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ . ಆರಿಫ್ ತೊಕ್ಕೊಟು ಫ್ಲೈ ಓವರ್ ಮೇಲೆ  ತೆರಳುತ್ತಿದ್ದ  ವೇಳೆ  ಹಿಂಬದಿಯಿಂದ ಕಾರಿನಿಂದ ಡಿಕ್ಕಿ ಹೊಡೆಯಲಾಗಿದೆ. ಡಿಕ್ಕಿಯ ರಭಸದಕ್ಕೆ ರಸ್ತೆಗೆ ಬಿದ್ದ ಆರಿಫ್ನನ್ನ ದುಷ್ಕರ್ಮಿಗಳ ತಂಡ ಕಡಿದು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

2022 ರಲ್ಲಿ ಇದೇ ಆರಿಫ್ನ ಹತ್ಯೆಗೆ ಯತ್ನ ನಡೆದಿತ್ತು. ಆದರೆ ಅಂದು ಬಚಾವಾಗಿದ್ದ ಆರಿಫ್ ಇಂದು ಕೊಲೆಯಾಗಿ ಹೋಗಿದ್ದಾನೆ. ಈತ ನಸುಕಿನ ಜಾವದಲ್ಲಿ ಬೈಕ್ ನಲ್ಲಿ ದಕ್ಕೆಗೆ ಹೋಗುದನ್ನ ಅರಿತಿದ್ದವರು ಹೊಂಚು ಹಾಕಿ ಕೊಲೆ ಮಾಡಿರುವ ಸಾಧ್ಯತೆ ಇದೆ. 

ತೊಕ್ಕೊಟು ಫ್ಲೈ ಓವರ್ ಮೇಲೆ ನಡೆದಿರುವುದು ಕೊಲೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟ ಪಡಿಸಿದ್ದಾರೆ. ಸ್ಥಳದ ದೃಶ್ಯ ಮತ್ತು ಗಾಯಗಳನ್ನು ನೋಡುವಾಗ ಕೊಲೆಯೆಂದು ಸ್ಪಷ್ಟವಾಗುತ್ತೆ ಎಂದಿದ್ದಾರೆ.ಕೊಲೆ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ. ನಮಗೂ ಸುಳಿವು ಸಿಕ್ಕಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆಯಲ್ಲಿದ್ದಾರೆ ಕಮಿಷನ್ ಸುದೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ DCP ಮಿಥುನ್ ತಂಡ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದೆ. ಅಂದಹಾಗೆ ಮಂಗಳೂರು ಕಮಿಷನರ್ ಸುದೀರ್ ಕುಮಾರ್ ರೆಡ್ಡಿ ನೇಮಕವಾದ ಬಳಿಕ ಕಳೆದ  ಜೂನ್ ತಿಂಗಲಿನಿಂದ ಇವತ್ತಿನ ವರೆಗ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿ ಎಲಿಮೆಂಟ್ ಗಳನ್ನ ಕಟ್ಟಿ ಹಾಕಿದ್ದರು ರೌಡಿಸಂಗೆ ಅವಕಾಶವೇ ಇಲ್ಲದಂತೆ ಮಾಡಿದ್ದರು. ಅದರಿಂದ ರೌಡಿ ಕಾಲಗಳಿಗೆ ಬ್ರೇಕ್ ಬಿದ್ದಿತ್ತು. ಕಮಿಷನರ್ ಭಯದಲ್ಲಿ ಹಲವು ರೌಡಿಗಳು ನಗರವನ್ನೇ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸವಾಲು ಎಸೆಯುವಂತೆ ಇಂದು ತೊಕ್ಕೊಟು ಫ್ಲೈ ಓವರ್ ನಲ್ಲಿ ನಸುಕಿನ ವೇಳೆಯಲ್ಲಿ  ಕೊಲೆ ನಡೆದಿದೆ.ಕಮಿಷನರ್ ರೆಡ್ಡಿ ಬಂದ ಮೇಲೆ ತಣ್ಣಗೆ ಮಲಗಿದ್ದ ರೌಡಿ ಗಳು ಮತ್ತೆ ಎದ್ದು ನಿಲ್ಲುವ ಪ್ರಯತ್ನ ನಡೆಸುತ್ತ ಇದ್ದಾರೆ ಎಂಬ ಅನುಮಾನ ಕಾಡುತ್ತ ಇದೆ.

Comments

Popular posts from this blog

ಮಂಗಳೂರಿನ ವಾತಾವರಣದಲ್ಲಿ ಬದಲಾವಣೆ:ಮೋಡ ಕವಿದ ಆಕಾಶ, ಜನರಿಗೆ ಸ್ವಲ್ಪ ನೆಮ್ಮದಿ

ಬೈಕಂಪಾಡಿ ಹತ್ತಿರ ಹೈವೇ ಮೇಲೆ ಅಳವಡಿಸಿದ ಗ್ಯಾಂಟ್ರಿ ಸ್ಟ್ರಕ್ಚರ್ ಏನು? ಜನರಿಗೆ ತಿಳಿಯಬೇಕಾದ ಪ್ರಮುಖ ಮಾಹಿತಿ

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲು: ಇವತ್ತಿನ Weather ಅಪ್ಡೇಟ್ ಮತ್ತು ಜನರಿಗೆ ಆರೋಗ್ಯ ಎಚ್ಚರಿಕೆ