Iran vs America ಯುದ್ಧ: ಕರ್ನಾಟಕದಲ್ಲಿರುವ ಭಾರತದ "Magic Box" ಬಗ್ಗೆ ನಿಮಗೆ ಗೊತ್ತೇ?
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದಾಗಿನಿಂದ ಜಗತ್ತಿನಾದ್ಯಂತ ತೈಲ ಮಾರುಕಟ್ಟೆ ಕಂಗಾಲಾಗುತ್ತಿದೆ.ವಿಶೇಷವಾಗಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದ ತೈಲ ಬೆಲೆ ಏರಿಕೆಯಾಗಬಹುದು ಎಂಬ ಭಯ ಜಾಗತಿಕ ಮಟ್ಟದಲ್ಲಿ ಕಾಣಿಸುತ್ತಿದೆ.ನಮ್ಮ ಭಾರತವೂ ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ.ಆದುದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ದೊಡ್ಡದಾಗಿ ಬೆಳೆಯುತ್ತಿದ್ದು ಆವಾಗ ಭಾರತಕ್ಕೆ ತೈಲ ಸರಬರಾಜು ಹೇಗೆ ನಡೆಯುತ್ತದೆ ಎಂಬ ಪ್ರಶ್ನೆ ಹಲವರಿಗೆ ಬರುತ್ತದೆ.
ಆದರೆ ಬಹುತೇಕ ಜನರಿಗೆ ಗೊತ್ತಿಲ್ಲದ ಒಂದು ಪ್ರಮುಖ ವಿಷಯ ಇದೆ.ಭಾರತ ಸರ್ಕಾರ ಈಗಾಗಲೇ ತುರ್ತು ಪರಿಸ್ಥಿತಿಗಳಿಗೆ ಸಿದ್ಧವಾಗಿದ್ದು, ಭೂಗರ್ಭದಲ್ಲಿ ದೊಡ್ಡ ಪ್ರಮಾಣದ ತೈಲ ಸಂಗ್ರಹಣೆಯನ್ನು ನಿರ್ಮಿಸಿದೆ.ಈ ವ್ಯವಸ್ಥೆಯನ್ನು StrategicPetroleumReserve (SPR) ಎಂದು ಕರೆಯಲಾಗುತ್ತದೆ.ಇದನ್ನು ನಿರ್ವಹಿಸುವ ಸಂಸ್ಥೆ Indian Strategic Petroleum Reserves Limited. ಸರಳವಾಗಿ ಹೇಳುವುದಾದರೆ,ದೇಶಕ್ಕೆ ತುರ್ತು ಸಂಧರ್ಭಗಳಲ್ಲಿ ತೈಲ ಪೂರೈಸುವ "ರಹಸ್ಯ ಸಂಗ್ರಹಣೆ" ಇದಾಗಿದೆ.ಕೆಲವರು ಇದನ್ನು "Oil Magic Box" ಎಂದು ಕರೆಯುತ್ತಾರೆ.
ಕರ್ನಾಟಕದಲ್ಲಿ ಇರುವ ಭಾರತದ ಪ್ರಮುಖ oil reserve
ಭಾರತದಲ್ಲಿ ಮೂರು ಪ್ರಮುಖ Strategic Oil Reserve ಸ್ಥಳಗಳಿವೆ.ಅವುಗಳಲ್ಲಿ ಎರಡು ಕರ್ನಾಟಕದಲ್ಲಿವೆ.ಅವುಗಳೆಂದರೆ Mangaluru ಮತ್ತು Padur. ಇನ್ನೊಂದು ಸಂಗ್ರಹಣೆ Vishakapattanam ನಗರದಲ್ಲಿದೆ.
ಈ ಸ್ಥಳಗಳಲ್ಲಿ ಭೂಗರ್ಭದ ದೊಡ್ಡ ಕಲ್ಲಿನ ಗುಹೆಗಳನ್ನು ತೋಡಿ ಅವುಗಳೊಳಗೆ ಕಚ್ಚಾ ತೈಲವನ್ನು ಸಂಗ್ರಹಿಸಲಾಗಿದೆ.ಸಾಮಾನ್ಯವಾಗಿ ನಾವು ತೈಲವನ್ನು ದೊಡ್ಡ ಟ್ಯಾಂಕುಗಳಲ್ಲಿ ಸಂಗ್ರಹಿಸುವುದನ್ನು ನೋಡುತ್ತೇವೆ.ಆದರೆ StrategicPetroleumReserve ಗಾಗಿ ಭೂಗರ್ಭದ rock caverns ಬಳಸಲಾಗುತ್ತದೆ. ಇದು ಹೆಚ್ಚು ಸುರಕ್ಷಿತವಾಗಿರುವ ವಿಧಾನ.ಹೊರಗಿನ ದಾಳಿ,ಪ್ರಕೃತಿ ವಿಕೋಪ ಅಥವಾ ಅಪಘಾತಗಳಿಂದ ರಕ್ಷಣೆ ಪಡೆಯಲು ಇದು ಸಹಾಯ ಮಾಡುತ್ತದೆ.
ಈ ಮೂರು ಸ್ಥಳಗಳ ಒಟ್ಟು ಸಂಗ್ರಹ ಸಾಮರ್ಥ್ಯ ಸುಮಾರು 5.33 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ. ಇದು ಭಾರತದ ದಿನನಿತ್ಯದ ಬಳಕೆಯನ್ನು ಗಮನಿಸಿದರೆ ಸುಮಾರು 9 ರಿಂದ 10 ದಿನಗಳವರೆಗೆ ದೇಶದ ತೈಲ ಅಗತ್ಯವನ್ನು ಪೂರೈಸುವಷ್ಟು ಸಂಗ್ರಹವಾಗಿದೆ.
ಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ತೈಲ ಎಲ್ಲಿಂದ ಆಮದು ಮಾಡಿಕೊಳ್ಳುತ್ತವೆ?
Iran - America ಯುದ್ಧದ ಪರಿಸ್ಥಿತಿಯಲ್ಲಿ ಮಧ್ಯ ಪ್ರಾಚ್ಯದಲ್ಲಿ ತೈಲ ಸರಬರಾಜು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ.ಆದರೆ ಭಾರತ ಆ ಸಮಯದಲ್ಲಿ ತಕ್ಷಣ ಸಂಕಷ್ಟಕ್ಕೆ ಸಿಲುಕುವುದಿಲ್ಲ.ಏಕೆಂದರೆ ದೇಶದಲ್ಲಿ ಹಲವು ಮಟ್ಟದ ತೈಲ ಸಂಗ್ರಹ ವ್ಯವಸ್ಥೆ ಇದೆ.
1. Strategic Petroleum Reserve (SPR)
2. ರಿಫೈನರಿಗಳಲ್ಲಿ ಇರುವ ಕಚ್ಚಾ ತೈಲ ಸಂಗ್ರಹ
3.ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಣೆ
4.ಸಮುದ್ರ ಮಾರ್ಗದಲ್ಲಿ ಬರುತ್ತಿರುವ ಆಮದು ತೈಲ
ಈ ಎಲ್ಲಾ ಸಂಗ್ರಹಗಳನ್ನು ಸೇರಿಸಿ ನೋಡಿದರೆ ಭಾರತಕ್ಕೆ ಸುಮಾರು 60 ರಿಂದ 70 ದಿನಗಳವರೆಗೆ ತೈಲ ಲಭ್ಯವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.ಅಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಸಮಸ್ಯೆ ಉಂಟಾದರೂ ಭಾರತಕ್ಕೆ ತಕ್ಷಣ ಪರಿಣಾಮ ಬೀರುವುದಿಲ್ಲ.
ಕರ್ನಾಟಕ ಪಾತ್ರ ಏಕೆ ಪ್ರಮುಖ?
ಕರ್ನಾಟಕದಲ್ಲಿರುವ Padur ಮತ್ತು Mangaluru
ಸಂಗ್ರಹಣೆಗಳು ದೇಶದ energy security ge ಬಹಳ ಮುಖ್ಯ.ಇವು ಸಮುದ್ರ ಬಂದರುಗಳಿಗೆ ಹತ್ತಿರವಾಗಿರುದರಿಂದ ವಿದೇಶಗಳಿಂದ ತೈಲವನ್ನು ಸುಲಭವಾಗಿ ತರಬಹುದು.ಜೊತೆಗೆ ಮಂಗಳೂರು ಪ್ರದೇಶದಲ್ಲಿ ಇರುವ ರಿಫೈನರಿ ಮತ್ತು ತೈಲ ಸಂಸ್ಕರಣಾ ಘಟಕಗಳು ದೇಶದ ತೈಲ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Padur ಪ್ರದೇಶದಲ್ಲಿ ನಿರ್ಮಿಸಿರುವ underground cavernಗಳು ಭಾರತದ ದೊಡ್ಡ strategic oil storage ಗಳಲ್ಲಿ ಒಂದಾಗಿದೆ.ಈ ಸಂಗ್ರಹಣೆಗಳು ಭವಿಷ್ಯದ ಸಂಕಷ್ಟಗಳನ್ನು ಎದುರಿಸಲು ನಿರ್ಮಿಸಲ್ಪಟ್ಟಿದೆ.
ಭವಿಷ್ಯದಲ್ಲಿ ಇನ್ನಷ್ಟು Oil Reserve
ಭಾರತ ಸರ್ಕಾರ ಈಗ Strategic Petroleum Reserve ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಯೋಜನೆ ಮಾಡಿಕೊಂಡಿದೆ.ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸ್ಥಳಗಳಲ್ಲಿ ಹೊಸ ಸಂಗ್ರಹಣೆಗಳನ್ನು ನಿರ್ಮಿಸುವ ಯೋಜನೆ ಇದೆ.ಇದರಿಂದ ದೇಶಕ್ಕೆ ಇನ್ನಷ್ಟು ದಿನಗಳ energy security ಸಿಗಲಿದೆ.
ಜನರಿಗೆ ಅರಿವು ಬೇಕಾದ ವಿಷಯ
ಬಹಳಷ್ಟು ಜನರು ತೈಲ ಬೆಲೆ ಏರಿದಾಗ ಮಾತ್ರ ಈ ವಿಷಯವನ್ನು ಗಮನಿಸುತ್ತಾರೆ.ಆದರೆ ದೇಶದ energy security ಯಲ್ಲಿ Strategic Petroleum Reserve ಬಹಳ ಮುಖ್ಯ. ಮಧ್ಯ ಪ್ರಾಚ್ಯದಲ್ಲಿ ಯುದ್ಧವಾದರೂ ಭಾರತಕ್ಕೆ ತಕ್ಷಣ ತೈಲ ಸಂಕಷ್ಟ ಎದುರಾಗದಂತೆ ಈ ವ್ಯವಸ್ಥೆ ಸಹಾಯ ಮಾಡುತ್ತದೆ.
ಆದ್ದರಿಂದ ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಘರ್ಷವೂ ಆದಷ್ಟು ಬೇಗ ಕೊನೆಗೊಂಡು ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂಬುದು ಎಲ್ಲರ ಆಶೆಯಾಗಿದೆ.
Comments
Post a Comment