ಮಂಗಳೂರಿನಲ್ಲಿ myG Future ನೂತನ ಶಾಖೆ ಉದ್ಘಾಟನೆ: ಗ್ರಾಹಕರಿಗೆ ಹೊಸ ಶಾಪಿಂಗ್ ಅನುಭವ


 ಸುಮಾರು 25,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ myG Future ಶೋರೂಮ್, ದೊಡ್ಡ ಮಟ್ಟದತಂತ್ರಜ್ಞಾನ ಅನುಭವ ಕೇಂದ್ರವಾಗಿ ರೂಪುಗೊಂಡಿದೆ. ಇಲ್ಲಿ ಸ್ಮಾರ್ಟ್ ಫೋನ್ ಗಳು, ಟೆಲಿವಿಷನ್ ಗಳು,ಲ್ಯಾಪ್ ಟಾಪ್, ಗಳು, ಗೃಹೋಪಯೋಗಿ ವಿದ್ಯುತ್ ಸಾಧನಗಳು, ಗೇಮಿಂಗ್ ಉತ್ಪನ್ನಗಳು, ಕಿಚನ್ ಉಪಕರಣಗಳು  ಹಾಗೂ ಸ್ಮಾರ್ಟ್ ಹೋಮ್ ಆಟೋಮೇಷನ್ ಪರಿಹಾರಗಳು -  all under one roof - ಗ್ರಾಹಕರಿಗೆ ಲಭ್ಯವಾಗುತ್ತವೆ. ಆಧುನಿಕ ಹಾಗೂ ಇಮರ್ಸಿವ್ ಶಾಪಿಂಗ್ ಅನುಭವವನ್ನು ನೀಡುವ ಉದ್ದೇಶದಿಂದ, ಪರಿಣಿತ ಸಿಬ್ಬಂದಿ ಹಾಗೂ ವಿಶ್ವಾಸಾರ್ಹ ಆಫ್ಟರ್ - ಸೇಲ್ಸ್ ಸೇವೆಗಳೊಂದಿಗೆ ಈ ಶೋರೂಮ್ ಕಾರ್ಯನಿರ್ವಹಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ನಟ ರಿಷಬ್ ಶೆಟ್ಟಿ, ಕೇರಳದ ಹೊರಗೆ myG ತನ್ನ ಮೊದಲ ಶೋರೂಂ ಆರಂಭಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಕರ್ನಾಟಕದಲ್ಲಿ ಕಂಪನಿಯ ಮುಂದಿನ ವಿಸ್ತರಣೆಗೆ ಶುಭ ಹಾರೈಸಿದರು.ದೊಡ್ಡ ಮಟ್ಟದ ಟೆಕ್ನಾಲಜಿ ಅನುಭವ ಕೇಂದ್ರದ ಪರಿಕಲ್ಪನೆಯನ್ನು ಮೆಚ್ಚಿಕೊಂಡ ಅವರು, ಇಂತಹ ಪ್ರಯತ್ನಗಳು ಜನರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ ಎಂದು ಅಭಿಪ್ರಾಯಪಟ್ಟರು.

ಕಂಪನಿಯ ಅಧ್ಯಕ್ಷ ಎ ಕೆ ಶಾಜಿ ಅವರು , myG Future ಶೋರೂಂ ಸಂಸ್ಥೆಯ ಭವಿಷ್ಯ ದೃಷ್ಟಿಯ ಪ್ರತಿಬಿಂಬವಾಗಿದ್ದು, ಗ್ರಾಹಕರಿಗೆ ಹೊಸ ರೀತಿಯ ವಿಶಾಲ ಹಾಗೂ ತಂತ್ರಜ್ಞಾನ ಆಧಾರಿತ ಶಾಪಿಂಗ್ ಅನುಭವವನ್ನು ಒದಗಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.ಕರ್ನಾಟಕದಲ್ಲಿ ಈ ಮಾದರಿಯನ್ನು ಪರಿಚಯಿಸಲು ಮಂಗಳೂರು ಸೂಕ್ತ ನಗರವಾಗಿದ್ದು, ಉತ್ತಮ ರಿಟೇಲ್ ಸೇವೆಗಳ ಜೊತೆಗೆ ಉದ್ಯೋಗಾವಕಾಶಗಳು ಹಾಗೂ ಕೌಶಲ್ಯಾಭಿವೃದ್ಧಿಗೆ ಸಹ ಈ ಯೋಜನೆ ನೆರವಾಗಲಿದೆ ಎಂದು ಅವರು ಹೇಳಿದರು.

ಈ ಶೋರೂಮ್ ಆರಂಭದಿಂದ ರಿಟೇಲ್, ಲಾಜಿಸ್ಟಿಕ್ಸ್, ಗ್ರಾಹಕ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆಗೆ ಸಹ ಇದರಿಂದ ಉತ್ತೇಜನ ಸಿಗಲಿದೆ.

2006ರಲ್ಲಿ ಸ್ಥಾಪನೆಯಾದ myG ಸಂಸ್ಥೆ, ಈಗಾಗಲೇ ದೇಶದಾದ್ಯಂತ 150ಕ್ಕೂ ಹೆಚ್ಚು ಶೋರೂಂಗಳನ್ನು ನಡೆಸುತ್ತಿದ್ದು, ಒಂದು ಕೋಟಿಗೂ ಹೆಚ್ಚು ತೃಪ್ತಿಗೊಂಡ ಗ್ರಾಹಕರನ್ನು ಹೊಂದಿದೆ. ವ್ಯಾಪಕ ಉತ್ಪನ್ನಗಳು, ಸ್ಪರ್ಧಾತ್ಮಕ ಬೆಲೆ ಹಾಗೂ ನಂಬಿಗಸ್ತ ಸೇವೆಗಳ ಮೂಲಕ ತನ್ನದೇ ಆದ ಹೆಸರು ಗಳಿಸಿರುವ myG, ಇದೀಗ ಕರ್ನಾಟಕದಲ್ಲೂ ತನ್ನ ವಿಸ್ತರಣೆಯನ್ನು ಮುಂದುವರಿಸಲು ಯೋಜನೆ ರೂಪಿಸಿದೆ.

ಉದ್ಘಾಟನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿದ್ದು, ಗ್ರಾಹಕರು ಮತ್ತು ಅತಿಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರೊಂದಿಗೆ myG ಸಂಸ್ಥೆಯ ಕರ್ನಾಟಕ ಪ್ರವೇಶಕ್ಕೆ ಭರ್ಜರಿ ಆರಂಭ ದೊರಕಿದಂತಾಗಿದೆ.



Comments

Popular posts from this blog

ಮಂಗಳೂರಿನ ವಾತಾವರಣದಲ್ಲಿ ಬದಲಾವಣೆ:ಮೋಡ ಕವಿದ ಆಕಾಶ, ಜನರಿಗೆ ಸ್ವಲ್ಪ ನೆಮ್ಮದಿ

ಬೈಕಂಪಾಡಿ ಹತ್ತಿರ ಹೈವೇ ಮೇಲೆ ಅಳವಡಿಸಿದ ಗ್ಯಾಂಟ್ರಿ ಸ್ಟ್ರಕ್ಚರ್ ಏನು? ಜನರಿಗೆ ತಿಳಿಯಬೇಕಾದ ಪ್ರಮುಖ ಮಾಹಿತಿ

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲು: ಇವತ್ತಿನ Weather ಅಪ್ಡೇಟ್ ಮತ್ತು ಜನರಿಗೆ ಆರೋಗ್ಯ ಎಚ್ಚರಿಕೆ