ಮಂಗಳೂರಿನಲ್ಲಿ ಮತ್ತೆ ರಕ್ತಪಾತ : ತೊಕ್ಕೊಟ್ಟು ಫ್ಲೈ ಓವರ್ ಮೇಲೆ ರೌಡಿ ಶೀಟರ್ ಬರ್ಬರ ಹತ್ಯೆ
ಕಳೆದ ಹತ್ತು ತಿಂಗಳಿನಿಂದ ಮಂಗಳೂರು ನಗರ ರೌಡಿಗಳ ಹಾವಳಿಯಿಂದ ಮುಕ್ತ ವಾಗಿತ್ತು.ಆದರೆ ಮತ್ತೆ ಮಾರಕಾಸ್ತ್ರಗಳು ಝಲಪಿಸಿದೆ.ಬಿಲ ಸೇರಿದ್ದ ಪಾತಕಿಗಳು ಹೊರಬಂದು ಇವತ್ತು ರಸ್ತೆಯಲ್ಲೇ ಒಂದು ಹೆಣ ಹಾಕಿದ್ದಾರೆ.ನಸುಕಿನ ಜಾವದಲ್ಲಿ ಮಂಗಳೂರು ನಿಶ್ಶಬ್ದವಾಗಿದ್ದಾಗಲೇ ರೌಡಿಗಳು ರಕ್ತ ಹರಿಸಿದ್ದಾರೆ. ಇಂದು ಮುಂಜಾನೆ ತೊಕ್ಕೊಟು ಸೇತುವೆ ಮೇಲೆಯೇ ರೌಡಿ ಶೀಟರ್ ಒಬ್ಬನ ಬರ್ಬರ ಹತ್ಯೆ ನಡೆದಿದೆ. ಆರಿಫ್ ಹುಸೇನ್ ಅಲಿಯಾಸ್ (ಟ್ಯಾಬ್ಲೆಟ್ ಆರಿಫ್) ಕೊಲೆಯಾದ ರೌಡಿ ಶೀಟರ್, ಈತ ಮೂಲತಃ ಮಂಗಳೂರಿನ ಕುದ್ರೋಳಿ ನಿವಾಸಿ. ಸದ್ಯ ಉಚ್ಚಿಲದ ಮುಳ್ಳುಗಡ್ಡೆಯಲ್ಲಿ ವಾಸವಿದ್ದ.42 ವರ್ಷದ ಟ್ಯಾಬ್ಲೆಟ್ ಆರಿಫ್ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಇದೆ .ಈತ ಧಕ್ಕೆಯಲ್ಲಿ ಮೀನಿನ ವ್ಯಾಪಾರ ಮಾಡುತ್ತ ಇದ್ದ, ತನ್ನ ವ್ಯಾಪಾರಕ್ಕಾಗಿ ಬೈಕಿನಲ್ಲಿ ಧಕ್ಕೆಗೆ ಹೋಗುತ್ತಾ ಇದ್ದ ಸಂಧರ್ಬದಲ್ಲಿ ಕಾರಿನಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಟ್ಯಾಬ್ಲೆಟ್ ಆರಿಫ್ನನ್ನ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ . ಆರಿಫ್ ತೊಕ್ಕೊಟು ಫ್ಲೈ ಓವರ್ ಮೇಲೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಿಂದ ಡಿಕ್ಕಿ ಹೊಡೆಯಲಾಗಿದೆ. ಡಿಕ್ಕಿಯ ರಭಸದಕ್ಕೆ ರಸ್ತೆಗೆ ಬಿದ್ದ ಆರಿಫ್ನನ್ನ ದುಷ್ಕರ್ಮಿಗಳ ತಂಡ ಕಡಿದು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ...