ಮಂಗಳೂರಿನಲ್ಲಿ myG Future ನೂತನ ಶಾಖೆ ಉದ್ಘಾಟನೆ: ಗ್ರಾಹಕರಿಗೆ ಹೊಸ ಶಾಪಿಂಗ್ ಅನುಭವ
ಸುಮಾರು 25,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ myG Future ಶೋರೂಮ್, ದೊಡ್ಡ ಮಟ್ಟದತಂತ್ರಜ್ಞಾನ ಅನುಭವ ಕೇಂದ್ರವಾಗಿ ರೂಪುಗೊಂಡಿದೆ. ಇಲ್ಲಿ ಸ್ಮಾರ್ಟ್ ಫೋನ್ ಗಳು, ಟೆಲಿವಿಷನ್ ಗಳು,ಲ್ಯಾಪ್ ಟಾಪ್, ಗಳು, ಗೃಹೋಪಯೋಗಿ ವಿದ್ಯುತ್ ಸಾಧನಗಳು, ಗೇಮಿಂಗ್ ಉತ್ಪನ್ನಗಳು, ಕಿಚನ್ ಉಪಕರಣಗಳು ಹಾಗೂ ಸ್ಮಾರ್ಟ್ ಹೋಮ್ ಆಟೋಮೇಷನ್ ಪರಿಹಾರಗಳು - all under one roof - ಗ್ರಾಹಕರಿಗೆ ಲಭ್ಯವಾಗುತ್ತವೆ. ಆಧುನಿಕ ಹಾಗೂ ಇಮರ್ಸಿವ್ ಶಾಪಿಂಗ್ ಅನುಭವವನ್ನು ನೀಡುವ ಉದ್ದೇಶದಿಂದ, ಪರಿಣಿತ ಸಿಬ್ಬಂದಿ ಹಾಗೂ ವಿಶ್ವಾಸಾರ್ಹ ಆಫ್ಟರ್ - ಸೇಲ್ಸ್ ಸೇವೆಗಳೊಂದಿಗೆ ಈ ಶೋರೂಮ್ ಕಾರ್ಯನಿರ್ವಹಿಸುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ನಟ ರಿಷಬ್ ಶೆಟ್ಟಿ, ಕೇರಳದ ಹೊರಗೆ myG ತನ್ನ ಮೊದಲ ಶೋರೂಂ ಆರಂಭಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಕರ್ನಾಟಕದಲ್ಲಿ ಕಂಪನಿಯ ಮುಂದಿನ ವಿಸ್ತರಣೆಗೆ ಶುಭ ಹಾರೈಸಿದರು.ದೊಡ್ಡ ಮಟ್ಟದ ಟೆಕ್ನಾಲಜಿ ಅನುಭವ ಕೇಂದ್ರದ ಪರಿಕಲ್ಪನೆಯನ್ನು ಮೆಚ್ಚಿಕೊಂಡ ಅವರು, ಇಂತಹ ಪ್ರಯತ್ನಗಳು ಜನರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ ಎಂದು ಅಭಿಪ್ರಾಯಪಟ್ಟರು. ಕಂಪನಿಯ ಅಧ್ಯಕ್ಷ ಎ ಕೆ ಶಾಜಿ ಅವರು , myG Future ಶೋರೂಂ ಸಂಸ್ಥೆಯ ಭವಿಷ್ಯ ದೃಷ್ಟಿಯ ಪ್ರತಿಬಿಂಬವಾಗಿದ್ದು, ಗ್ರಾಹಕರಿಗೆ ಹೊಸ ರೀತಿಯ ವಿಶಾಲ ಹಾಗೂ ತಂತ್ರಜ್ಞಾನ ಆಧಾರಿತ ಶಾಪಿಂಗ್ ಅನುಭವವನ್ನು ಒದಗಿಸುವ ಉದ್ದೇಶ ಹೊಂದ...